ಬೆಳಗಾವಿ:  ಕಳೆದ ಒಂದು ವರ್ಷದಿಂದ ರಾಜ್ಯಕ್ಕೆ ಆಗಿಂದಾಗ್ಗೆ ನಾಗ ಸಾಧುಗಳು ಭೇಟಿ ನೀಡುವುದು ಹೋಮ, ಹವನಮಾಡುವುದು ನೋಡಿದ್ರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಎಂಬ ಅನುಮಾನಗಳು ಕಾಡ ಬಹುದಲ್ವಾ ಹಾಗಾದ್ರೆ

ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿದ ನಾಗಾ ಸಾಧುಗಳು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬಳಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ ಹೇಗೆ ಅದ್ಭುತವಾದ ಜಯ ಸಾಧಿಸಿತೋ ಅದೇ ರೀತಿ ಕರ್ನಾಟಕದಲ್ಲೂ ಸಾಧನೆ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರಂತೆ. ಅದು ಶಿವರಾತ್ರಿಯ ದಿನ.!

ಹೇಳಿ ಕೇಳಿ ಶಿವರಾತ್ರಿ. ಇನ್ನು ನಾಗಾಸಾಧುಗಳ ಬಗ್ಗೆ ಉತ್ತರ ಭಾರತದಲ್ಲಿ ವಿಪರೀತ ಶ್ರದ್ಧೆ ಹಾಗೂ ಭಕ್ತಿ. ಅಂಥವರು ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಲಿದೆ ಎನ್ನುವ ಮೂಲಕ ಮತ್ತೂ ಕುತೂಹಲ ಮೂಡಿಸಿದ್ದಾರೆ.

ಆದ್ರೆ ಮತ ಹಾಕುವವರು ನಾಗ ಸಾಧುಗಳು ಅಲ್ಲ.! ಹಾಗೇನೆ. ಸಾಧುಗಳು ಹೇಳಿದ್ದೇಲ್ಲಾ ನಿಜ ಆಗೋದಾದ್ರೆ ಮಳೆ, ಪ್ರಕೃತಿ ವಿಕೋಪದ ಬಗ್ಗೆ ಮೊದಲೆ ತಿಳಿಸಿದ್ರೆ ಸರಿ ಅಲ್ವ  ಎಂದು ಇಲ್ಲೊಬ್ಬ ಪ್ರಶ್ನೆ ಮಾಡಿದ್ರೆ.?