ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗವು ಆಯೋಜಿಸಿದ ೨೦೧೯ ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಮ್ಯಾನಿಫೆಸ್ಟ್ ಐ.ಎ.ಎಸ್. ಸಂಸ್ಥೆಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಅಕ್ಟೋಬರ್ ೨೦೧೮ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ನಾಗರಿಕ ಸೇವಾ ಪರೀಕ್ಷೆಯ ಎಲ್ಲ ಹಂತದ ಎಂದರೆ, ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆಗಳ ತರಬೇತಿಯನ್ನು ನೀಡುತ್ತದೆ. ೨೦೧೮ ಹಾಗೂ ೨೦೧೯ ನೇ ವರ್ಷದಲ್ಲಿ ತಮ್ಮ ವಿವಿಧ ಬ್ಯಾಚಗಳಲ್ಲಿ ತರಬೇತಿ ಪಡೆದ ಕರ್ನಾಟಕದ ಹಾಗೂ ಇತರ ರಾಜ್ಯಗಳ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ಗಳೊಂದಿಗೆ ತೇರ್ಗಡೆಗೊಂಡಿದ್ದಾರೆ.

ಧೀರಜಕುಮಾರ್ ಸಿಂಗ್ ೬೪, ಸಾಯಿ ಕಾರ್ತಿಕ್ ೧೦೩, ಕುಮಾರ್ ಶಿವಾಶೀಶ್ ೧೦೮, ರಾಜೇಂದ್ರ ರಾಜ್ ೩೪೦, ಜಗದೀಶ್ ಅಡಹಳ್ಳಿ ೪೪೦, ಪ್ರಫುಲ್ ದೇಸಾಯಿ ೫೩೨, ದರ್ಶನಕುಮಾರ್ ೫೯೪, ಸಮೀರ ರಾಜಾ ೬೦೩, ಕುಮಾರಿ ಮನಿಷಾ ೬೧೭, ವಾದಿತ್ಯ ನಾಯ್ಕ್ ೭೮೦ನೇ ರ್ಯಾಂಕಗಳೊಂದಿಗೆ ಐ.ಎ.ಎಸ್., ಐ.ಪಿ.ಎಸ್. ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಜಗದೀಶ್, ಪ್ರಫುಲ್ ಹಾಗೂ ದರ್ಶನಕುಮಾರ್ ಕನ್ನಡಿಗರು. ವಿಶೇಷವೇನೆಂದರೆ ದರ್ಶನಕುಮಾರ್ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆಯನ್ನು ಬರೆದು ಯಶಸ್ವಿಯಾಗಿದ್ದಾರೆ.

ಕೇವಲ ಎರಡು ವರ್ಷಗಳಲ್ಲಿ ಇಷ್ಟು ಸಾಧನೆಗೈದ ಮ್ಯಾನಿಫೆಸ್ಟ್ ಸಂಸ್ಥೆಯು ತಮ್ಮ ಯಶಸ್ವಿ ವಿದ್ಯಾರ್ಥಿಗಳಿಗೆ ಶುಭಕೋರಿದೆ ಹಾಗೂ ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಫಲಿತಾಂಶ ನೀಡಲು ಸಿದ್ಧವಾಗಿದ್ದು, ಕೋವಿಡ-೧೯ ತಂದೊಡ್ಡಿದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಆನ್ಲೈನ್ ತರಗತಿಗಳನ್ನು ಸೆಪ್ಟೆಂಬರ 7 ರಿಂದ ಪ್ರಾರಂಭಿಸುತ್ತಿದೆ.