ಬೆಂಗಳೂರು: ನಿನ್ನೆ ನರೇಂದ್ರ ಮೋದಿ ಅವರು ಕುಮಾರಸ್ವಾಮಿಯವರನ್ನು ಕ್ಲರ್ಕ್ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಮಾತಿಗೆ ಜೆಡಿಎಸ್ ವರಿಷ್ಟ ದೇವೇಗೌಡರು ಹೀಗೆ ಹೇಳಿದ್ದಾರೆ.

ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ನಾವು ಈ ಹಿಂದೆ ಬಿಜೆಪಿ ಜೊತೆ ಹೋಗಿದ್ದಾಗಲೂ ಕಹಿ ಅನುಭವವಾಗಿತ್ತು ಎಂದರು.

ಡಿಸಿಎಂ ಜಿ. ಪರಮೇಶ್ವರ್ ಮಾತನಾಡಿ ಕುಮಾರಸ್ವಾಮಿ ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ಸ್ವೀಕರಿಸಿ ಸಿಎಂ ಆಗಿದ್ದಾರೆ. ಇದರ ಅರಿವು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಇರಬೇಕು. ಪಂಚರಾಜ್ಯ ಚುನಾವಣಾ ಸೋಲಿನಿಂದ ಬಿಜೆಪಿ ಮಾನಸಿಕವಾಗಿ ಕುಗ್ಗಿದೆ ಎಂದರು.