ಮಣಿಪಾಲ: ಎಲ್ಲವನ್ನೂ ಮಾಡೋದಕ್ಕೆ ಮೋದಿ ಜೇಮ್ಸ್ ಬಾಂಡ್ ಅಲ್ಲ ಎಂದು ರಾಷ್ಟ್ರೀಯ ಸಹ ಸಂಘಟನೆಯ ಕಾರ್ಯದರ್ಶಿ ಬಿ.ಎಲ್.ಸಂತೋಷ ಜಿ. ಹೇಳಿದ್ದಾರೆ.

ಮಣಿಪಾಲ್ ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು. ನಮ್ಮ ಸೈನಿಕರ ಸಾಧನೆಯನ್ನು ಮೋದಿ ಸಾಧನೆ ಎಂದು ನಾವು ಹೇಳಿಲ್ಲ ಎಂದರು.

ಸೈನಿಕರ ಜಾತಿ ಹುಡುಕುವ ರೋಗ ಹಿಂದೆ ಇರಲಿಲ್ಲ. ಈಗ ಎಲ್ಲಾ ಘಟನೆಗೂ ಸಾಕ್ಷಿ ಕೇಳುವವರು ಹುಟ್ಟಿಕೊಂಡಿದ್ದಾರೆ. ಮೋದಿ ಎರಡೂ ಕೈಯಲ್ಲಿ ಪಿಸ್ತೂಲು ಹಿಡಿದು ಹೋರಾಡಲ್ಲ. ಸೈನ್ಯವನ್ನು ಮುನ್ನಡೆಸೋದು ಮೋದಿಗೆ ಗೊತ್ತು ಎಂದರು.