ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಿದೇಶಕ್ಕೆ ಭೇಟಿ ನೀಡಿದ  ವಿಮಾನ ಪ್ರಯಾಣ ವೆಚ್ಚ 443.4 ಕೋಟಿ ಮೊತ್ತವನ್ನು ಸರ್ಕಾರ ಏರ್ ಇಂಡಿಯಾ ವೈಮಾನಿಕ ಸಂಸ್ಥೆಗೆ ನೀಡಿದೆ.

ಆದರೆ, ಐದು ಸಾಗರೋತ್ತರ ದೇಶಗಳ ಪ್ರವಾಸ ವೆಚ್ಚವನ್ನು ಇನ್ನು ನೀಡಿಲ್ಲ ಎಂದು ಸಂಸ್ಥೆ ತಿಳಿಸಿದೆ. ಪ್ರಧಾನೀ ಮೋದಿ ಐದು ವರ್ಷಗಳಲ್ಲಿ 44 ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ಎಲ್ಲಾ ವೆಚ್ಚವನ್ನು ಏರ್ ಇಂಡಿಯಾಕ್ಕೆ ಭರಿಸಲಾಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.