ಚಿತ್ರದುರ್ಗ: ಚುನಾವಣಾ ಪ್ರಚಾರಾರ್ಥವಾಗಿ ಇಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಚಿತ್ರದುರ್ಗ ಕೋಟೆನಾಡು  ಸಜ್ಜಾಗಿದೆ.

ಮೋದಿಯವರಿಗೆ ಈ ಭಾಗದ ದೈವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮಾದರಿ ಉಡುಗೊರೆ ನೀಡಲು ತಯಾರಿ ಮಾಡಿಕೊಂಡಿದ್ದಾರೆ.

ಹಾಗೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇರುವ ಹೋಟೆಲ್ ಉಪಾಧ್ಯ ವೆಜ್ ನಲ್ಲಿ ಫೇಮಸ್ ‘ಮಸಾಲ ದೋಸೆ’ ಸವಿಯಲಿದ್ದಾರಂತೆ. ಈಗಾಗಲೇ  ಭದ್ರತಾ ಪಡೆಗಳು ಹೋಟೆಲ್ ತಪಾಸಣೆ ನಡೆಸಿ, ಭದ್ರತೆ ಒದಗಿಸಿವೆ ಎಂದು ತಿಳಿದುಬಂದಿದೆ.