ನರೇಂದ್ರ ಮೋದಿಯವರು ಕನ್ನಡದಲ್ಲಿ ಮಾತನಾಡಿದ್ರು

ಹುಬ್ಬಳ್ಳಿ : ಹುಬ್ಬಳ್ಳಿ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೊದಲಿಗೆ ಕನ್ನಡದಲ್ಲಿ ಮಾತನಾಡಿ ಈ ನೆಲ ಕಲೆ, ಸಾಹಿತ್ಯ, ತಪಸ್ಸು, ತ್ಯಾಗ ಸಂಸ್ಕೃತಿಯ ಇತಿಹಾಸ ಪರಂಪರೆಯನ್ನು ಹೊಂದಿದ ಪುಣ್ಯಭೂಮಿ. ಈ ನಾಡಿಗೆ ಬಂದಿರುವುದು ರೋಮಾಂಚನ ಉಂಟುಮಾಡಿದೆ ಎಂದರು.

ಲೋಕಸಭೆ ಚುನಾವಣಾ ಪ್ರಚಾರಕ್ಕೆ ಕರ್ನಾಟಕದಲ್ಲಿ ಚಾಲನೆ ನೀಡಿದ ಅವರು.ಸಿದ್ಧಾರೂಢ ಸ್ವಾಮೀಜಿ, ಮೂರು ಸಾವಿರ ಮಠದ ಗುರುಸಿದ್ಧಯೋಗೀಂದ್ರ ಸ್ವಾಮೀಜಿ, ಗದುಗಿನ ವೀರನಾರಾಯಣ ಸ್ವಾಮೀಜಿಗಳಿಗೆ ನನ್ನ ನಮನಗಳು ಎಂದ ಅವರು, ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಬಡ ಮಕ್ಕಳಿಗೆ ಅನ್ನ, ವಿದ್ಯೆ ನೀಡುವ ಮೂಲಕ ದೇಶದ ಗೌರವವನ್ನು ಹೆಚ್ಚಿಸಿದವರು. ಅವರಿಗೂ ನನ್ನ ನಮನಗಳು ಎಂದು ನುಡಿನಮನ ಸಲ್ಲಿಸಿದರು.