ಬೀದರ್:  ಓಟಿಗಾಗಿ ಏನೆಲ್ಲಾ ಕಸರತ್ತು ಮಾಡ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ ಪ್ರಧಾನಿ‌ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ  ತವರು ಜಿಲ್ಲೆಯಲ್ಲಿ  ಮಾತನಾಡುತ್ತಾ, ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು ,ಕಾಂಗ್ರೇಸ್ ಮೋಸ ಮಾಡಿತ್ತು ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ  ಖರ್ಗೆ ಆವರು  ಮಾತನಾಡಿ  ನನ್ನನ್ನು ನನ್ನ ಪಕ್ಷ ಸಿಎಂ ಮಾಡಲಿಲ್ಲ ಅಂತ ಮೋದಿಯವರು ಹೇಳಿದ್ರು. ನಾನು ಸಿಎಂ ಆಗಲಿಲ್ಲ ಅಂತ ಒಪ್ಪಿಕೊಳ್ಳೋಣ ಆದ್ರೆ ನೀವು ನನಗೆ ವಿರೋಧ ಪಕ್ಷದ ಸ್ಥಾನ ಯಾಕೆ ಕೊಡಲಿಲ್ಲ ಮೊದಲು ಹೇಳಿ ಎಂದು ಹೇಳಿದ್ದಾರೆ. ಮೋದಿಯವರೇ ಇಲ್ಲಿ ಬಂದು ಅನಗತ್ಯ ಮಾತಾಡುವುದು ಸರಿಯಲ್ಲ. ಮೊದಲು ನಿಮ್ಮ ಕರ್ತವ್ಯ ನೀವು ನಿಭಾಯಿಸಿ. ನಿಮ್ಮ ಪಕ್ಷದಲ್ಲಿ ದಲಿತ ಮುಖಂಡರು ಗಪ್ ಚುಪ್ ಆಗಿದ್ದಾರೆ.

ನಿಮ್ಮ ಮುಂದೆ ದಲಿತ ಬಿಜೆಪಿ ನಾಯಕರು ದನಿ ತೆಗೆಯುವುದಿಲ್ಲ. ನಿಮ್ಮ ಅವಧಿಯಲ್ಲಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿದ್ದರು ನಿಮ್ಮ ದಲಿತ ನಾಯಕರು ಮೌನವಾಗಿದ್ದಾರೆ  ಆ ವಿಷುದ ಬಗ್ಗೆ ಮೊದಲು ಮಾತನಾಡಿ ಅಂತ ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಬಿಜೆಪಿಯ ದಲಿತ ಮುಖಂಡರು ಗಫ್ ಚುಪ್ ಆಗಿದ್ದಾರೆ.