ಬೆಳಗಾವಿ: ಪ್ರಧಾನಿ ಮೋದಿಯವರಿಗೆ ಯಡಿಯೂರಪ್ಪನವರ ಮೇಲೆ ಪ್ರೀತಿ ಇಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರವಾಹ ಭೀತಿ ವಿಚಾರದ ಕುರಿತು ‘ನಾವು ಬರೀ ಮೋದಿಯವರ ಭಾಷಣ ಕೇಳಬೇಕು ಹೊರತು ಅವರು ಕರ್ನಾಟಕಕ್ಕೆ ಸೂಕ್ತ ಪರಿಹಾರ ಕೊಡಲ್ಲ ಎಂದರು.

ಈ ಹಿಂದೆಯೂ ಸಾಕಷ್ಟು ಹಾನಿಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ರಾಜ್ಯಕ್ಕೆ ಬಂದಿಲ್ಲ’ ಎಂದು ಹೇಳಿದ್ದಾರೆ.