ಚಿತ್ರದುರ್ಗ: ಕಳೆದ ತಿಂಗಳು ಹಿರಿಯೂರು , ಹೊಳಲ್ಕೆರೆ, ಹೊಸುದುರ್ಗ, ನಿನ್ನೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ  ಆನೆಗಳು ಮತ್ತೆ ಚಳ್ಳಕೆರೆ ತಾಲ್ಲೂಕು ತಿಮ್ಮಪ್ಪಯ್ಯನ ಹಳ್ಳಿ ಬಳಿ ಎರಡು ಆನೆಗಳು ಪ್ರತ್ಯಕ್ಷವಾಗಿವೆ.

ಆನೆಗಳನ್ನು ನೋಡಲು ಜನರು ತಂಡೋಪ ತಂಡಾವಾಗಿ ಬರುತ್ತಿದ್ದಾರೆ. ಅಧಿಕಾರಿಗಳು ಆನೆಯನ್ನು ಓಡಿಸುವುದಕ್ಕಿಂತಲೂ ಜನರನ್ನು ತಡೆಯುವುದು ಹರಸಾಹವಾಗಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ, ಆನೆ ಕಾಡಿಗಟ್ಟಲು ಯತ್ನಸುತ್ತಿದ್ದಾರೆ, ಇತ್ತ ಪೊಲೀಸರು ಜನರನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ.