ಬೆಂಗಳೂರು: ಅಂತು ಸಚಿವ ಸಂಪುಟ ಆಸ್ತಿತ್ವಕ್ಕೆ ಬಂತು. ಆದ್ರೆ ನಮ್ಮ ಮಂತ್ರಿಗಳು ಓದಿದ ಓದಿಗೂ ಅವರಿಗೆ ಸಿಕ್ಕ ಖಾತೆಗಳಿಗೂ ಏನಾದರೂ ಸಂಬಂಧ ಇದೆಯಾ. ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ. ಓದಿದವರೆಲ್ಲಾ ಬುದ್ದಿವಂತರೇನಲ್ಲಾ ಎಂಬ ಮಾತು ಚಾಲ್ತಿಯಲ್ಲಿದ್ದರೂ, ಮಂತ್ರಿ ಆದವರು ತಾವು ಓದಿದ ಓದಿಗೂ ತಮಗೆ ಸಿಕ್ಕ ಖಾತೆಗೂ ತಾಳೆಹಾಕುತ್ತಿದ್ದಾರೆ  ಮಂದಿ.

ಹಾಗಾದರೆ ಕೆಲ ಮಂತ್ರಿಗಳ ವಿದ್ಯಾಭ್ಯಾಸ ಹಾಗೂ ಅವರ ಖಾತೆಗಳು ಯಾವಾವು ಎಂಬುದರ ಬಗ್ಗೆ……..

ಹೆಚ್‌.ಡಿ.ರೇವಣ್ಣ-ಲೋಕೋಪಯೋಗಿ ಇಲಾಖೆ : ಎಸ್.ಎಸ್.ಎಲ್.ಸಿ

ಜಿ.ಟಿ.ದೇವೇಗೌಡ-ಉನ್ನತ ಶಿಕ್ಷಣ ಇಲಾಖೆ: ಎಂಟನೇ ತರಗತಿ

ಎಂ.ಸಿ.ಮನಗೂಳಿ-ತೋಟಗಾರಿಕೆ ಇಲಾಖೆ: ಎಸ್.ಎಸ್.ಎಲ್.ಸಿ

ಸಿ.ಎಸ್.ಪುಟ್ಟರಾಜು-ಸಣ್ಣ ನೀರಾವರಿ ಇಲಾಖೆ: ಪಿಯುಸಿ

ಜಯಮಾಲಾ-ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಹೆಚ್. ಎಸ್.ಸಿ

ಆರ್​.ಶಂಕರ್-ಅರಣ್ಯ ಮತ್ತು ಪರಿಸರ ವಿಜ್ಞಾನ ಎಸ್.ಎಸ್.ಎಲ್.ಸಿ

ವೆಂಕಟರಮಣಪ್ಪ-ಕಾರ್ಮಿಕ ಇಲಾಖೆ ಎಸ್.ಎಸ್.ಎಲ್.ಸಿ

ಜಮೀರ್ ಅಹ್ಮದ್-ಆಹಾರ ಮತ್ತು ನಾಗರಿಕ ಸರಬರಾಜು: 9 ತನೇ ತರಗತಿ
ಪ್ರಿಯಾಂಕ್ ಖರ್ಗೆ-ಸಮಾಜ ಕಲ್ಯಾಣ ಇಲಾಖೆ: ಪಿಯುಸಿ
ಕೆ.ಜೆ.ಜಾರ್ಜ್-ಬೃಹತ್ ಕೈಗಾರಿಕೆ, ಐಟಿ-ಬಿಟಿ ಇಲಾಖೆ: ಪಿಯುಸಿ

ಇದಪ್ಪ ವರಸೆ ಹೇಗಿದೆ ನಮ್ಮ ಮಂತ್ರಿಗಳ ಓದು.?