1952 ರಿಂದ ನಮ್ಮ ಜಿಲ್ಲೆಯಲ್ಲಿ ಯಾರು ಯಾರು ಶಾಸಕರಾಗದ್ದರು. ಎಂಬುದರ ಮಾಹಿತಿ. ಮೊದಲಿಗೆ ಚಿತ್ರದುರ್ಗ ಕ್ಷೇತ್ರ
ಹೀಗೆ ಪ್ರತಿ ದಿನ ಜಿಲ್ಲೆಯ ಪ್ರತಿಯೊಂದು ಕ್ಷೇತ್ರದ ಮಾಹಿತಿ ನಿಮಗಾಗಿ
-ಸಂ

ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಮೊಟ್ಟ ಮೊದಲಬಾರಿಗೆ 1952 ರಲ್ಲಿ ಮುಲ್ಕಗೋವಿಂದರೆಡ್ಡಿಯವರು ವಿಧಾನಸಭೆಗೆ ಪ್ರವೇಶಿಸಿದರು. ಆ ನಂತರ ಜಿ.ಶಿವಪ್ಪ, ಜಿ.ದುಗಪ್ಪನವರು, ಹೆಚ್.ಸಿಬೋರಯ್ಯನವರು 1962 ಮತ್ತು 67ರವರೆಗೆ ಎರಡುಬಾರಿ ಶಾಸಕರಾಗಿದ್ದರು. ಮಹಮದ್ ಸೈಪುದ್ದೀನ್, ವಿ.ಮಸಿಯಪ್ಪ, ಬಿ.ಎಲ್.ಗೌಡರು, ಆ ನಂತರದಲ್ಲಿ ಸತತವಾಗಿ ಹೆಚ್.ಏಕಾಂತಯ್ಯನವರು ಎರಡುಬಾರಿ ಆಯ್ಕೆ ಆದರು. ನಂತರದ ಚುನಾವಣೆಗಳಲ್ಲಿ ಜಿ.ಹೆಚ್.ತಿಪ್ಪಾರೆಡ್ಡಿಯವರು ಸತತವಾಗಿ ಮೂರುಬಾರಿ ಆಯ್ಕೆಯಾದರು. ಎಸ್.ಕೆ.ಬಸವರಾಜನ್ ವಿಧಾನಸಭೆ ಪ್ರವೇಶಮಾಡಿದರು. ಮತ್ತೆ ನಡೆದ 2012-13 ಚುನವಣೆಯಲ್ಲಿ ಜಿ.ಹೆಚ್.ತಿಪ್ಪಾರೆಡ್ಡಿಯವರು ಶಾಸಕರಾಗಿ ಆಯ್ಕೆ ಆದರು.
2018 ಚುನಾವಣೆ ಯಾರ ಕೈ ಹಿಡಿಯುತ್ತೋ.?