1967 ರಿಂದ 2007-೦8 ರವರಗೆ ಚಿತ್ರದುರ್ಗ ಜಿಲ್ಲೆಯಲ್ಲಿ7 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು ಭರಮಸಾಗರ ಮತ್ತು ಹಿರಿಯೂರು ವಿಧಾನಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿದ್ದವು ಆನಂತರ ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಗಳು ಎಸ್.ಟಿಗೆ ಮತ್ತು ಹೊಳಲ್ಕೆರೆ ಕ್ಷೇತ್ರ ಎಸ್.ಸಿ ಮೀಸಲು ಕ್ಷೇತ್ರಗಳಾಗಿ ಪರಿವರ್ತನೆಗೊಂಡ ಮೇಲೆ ಚಿತ್ರದುರ್ಗ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಾದವು.

ಭರಮಸಾಗರ ಕ್ಷೇತ್ರ

1967 ರಲ್ಲಿ ಜಿ.ದುಗಪ್ಪನವರು ಪಕ್ಷೇತರರಗಿ ಶಾಸಕರಗಿ ಆಯ್ಕೆಯಾದರು. ಆನಂತರದಲ್ಲಿ ಹೆಚ್.ಬಿ.ಲಕ್ಷಣ್, ಟಿ.ಚೌಡಯ್ಯ, ಶಿವಮೂರ್ತಿ ನಾಯಕ್, ಡಾ||ಬಿ.ಎಂ.ತಿಪ್ಪೇಸ್ವಾಮಿ, ಕೆ.ಶಿವಮೂರ್ತಿ ನಾಯಕ್, ಅವರು ಶಾಸಕರಾದರು. ಚಂದ್ರಪ್ಪನವರು ಸತತವಾಗಿ ಎರಡುಬಾರಿ ಶಾಸಕರಾದರು. ಆನಂತರ ಹೆಚ್.ಆಂಜನೇಯರು ಆಯ್ಕೆಯಾದರು.

ಹೊಳಲ್ಕೆರೆ ಕ್ಷೇತ್ರ

1952,1957, ಮತ್ತು 62 ರವೆಗೆ ಮಧ್ಯೆ ಜಿ.ಶಿವಪ್ಪ ಬಿಟ್ಟರೆ ಉಳಿದ ಎಲ್ಲಾ ಟರ್ಮ್‌ನಲ್ಲೂ ಜಿ.ದುಗಪ್ಪನವರು ವಿಧಾನಸಭೆಗೆ ಆಯ್ಕೆಯಾದವರು. ಆ ನಂತರ ಚುನಾವಣೆಯಲ್ಲಿ ಎರಡುಬಾರಿ ಬಿ.ಪರಮೇಶ್ವರಪ್ಪ, ಕೆ.ಸಿದ್ದರಾಮಪ್ಪ, ಜಿ.ಶಿವಲಿಂಗಪ್ಪ, ಜಿ.ಸಿ.ಮಂಜುನಾಥ್, ಎ.ವಿ.ಉಮಾಪತಿಯರು ಎರಡುಬಾರಿ ಯು,ಹೆಚ್.ತಿಮ್ಮಣ್ಣ, ಪಿ.ರಮೇಶ್, ಮೀಸಲು ಕ್ಷೇತ್ರವಾದಮೇಲೆ ಚಂದ್ರಪ್ಪನವರು ಆಯ್ಕೆಯಾದರು ಆ ನಂತರ ನಡೆದ 2012-13 ರ ಚುನಾವಣೆಯಲ್ಲಿ ಹೆಚ್. ಆಂಜನೇಯನವರು ಆಯ್ಕೆ ಆಗಿದ್ದಾರೆ.