ಬೆಂಗಳೂರು:  ರಾಜಕಾರಣಿಗಳು ದೇಶ ಉದ್ದಾರ ಮಾಡಲ್ಲ.ದೇಶ ಅಭಿವೃದ್ಧಿ ಆಗಬೇಕಾದರೆ ನಿಮ್ಮಂತ ವಿದ್ಯಾರ್ಥಿಗಳು ಮುಂದೆ ಬರಬೇಕು ಅದು ನಿಮ್ಮಿಂದ ಮಾತ್ರ ಸಮಾಜ ಬದಲಾವಣೆ ಮಾಡಲು ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅಲ್ಲದೇ ಅಂಬೇಡ್ಕರ್ ಒಬ್ಬರಿಗೆ ಒಂದೇ ಮತ ನೀಡುವ ಅವಕಾಶವನ್ನು ನೀಡಿದ್ದಾರೆ. ಆದ್ದರಿಂದ ನೀವು ಜನಪ್ರತಿನಿಧಿಗಳನ್ನ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ ಎಂದರು.ಇನ್ನು ಕಲಾಂ ಅವರನ್ನೂ ಕೂಡ ಈ ವೇಳೆ ನೆನಪು ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಕಲಾಂ ಅವರು‌ ಸಾವನ್ನಪ್ಪಿದರು ಎಂದು ಹೇಳಿದರು.