Exif_JPEG_420

Exif_JPEG_420

ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಯಾವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಹೆಚ್.ಆಂಜನೇಯ ಪತ್ರಕರ್ತರ ಪ್ರಶ್ನೆ ಉತ್ತರಿಸಿದರು. ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸರಕಾರದ ಅಂಕಿ ಅಂಶದಂತೆ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬದವರಿಗೆ ಸಾಂತ್ವಾನ ಹೇಳುವ ಕಾರ್ಯಕ್ರದಮ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಕಳೆದ ವಾರ ಕೂನಬೇವಿನ ರೈತ ಸಿದ್ದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ಆಂಜನೇಯರು, ನೀವು ಯಾವುದೇ ಕಾರಣಕ್ಕೂ ದೃತಿಗೆಡಬಾರದು ನಾವು ನಮ್ಮ ಸರಕಾರ ನಿಮ್ಮೊಟ್ಟಿಗೆ ಇದ್ದೇವೆ ಎಂದರು.  ಸರಕಾರದಿಂದ ಬರುವು ಸವಲತ್ತುಗಳು ಜಿಲ್ಲಾಡಳಿತ ನೀಡುತ್ತದೆ. ಸಿದ್ದೇಶ್ನ ತಾಯಿ ಶಾಂತಮ್ಮ ನಮ್ಮ ಮಗ ಸಾಲ ಮಾಡಿ ಕೊಂಡಿದ್ದ. ಬೋರ್ ಸಹ ಕೊರೆಸಿದ್ದ ಆದರೆ ಮೋಟರ್ ಬೋರ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು ಇದರಿಂದಲೂ ಬೇಜಾರು ಮಾಡಿಕೊಂಡ   ಮಗ ಅತ್ತ ಕೈತುಂಬಾ ಸಾಲವನ್ನು ತೀರಿಸಲಾಗದೆ ಅತ್ತ ಬೆಳೆಯು ಸರಿಯಾಗ ಬಾರದೆ ಇರುವುದರಿಂದ ಮನನೊಂದು ನೇಣಿಗೆ ಶರಣಗಾಗಿದ್ದಾನೆ ಎಂದು ಹೇಳಿವುದರ ಜೊತೆಗೆ ತನನ್ನ ಮೊಮ್ಮಗಳು ಮುರಾಜರ್ಿ ಶಾಲೆಗೆ ಸೇರ ಬೇಕೆಂಬ ವಿಚಾರವನ್ನು ಹೇಳಿದಾಗ  ಮಂತ್ರಿಗಳು ಅವರ ಸಮಸ್ಯೆಗಳನ್ನು ಆಲಿಸಿಕೊಂಡು ತಕ್ಷಣವೇ ಮೊಮ್ಮಗಳಿಗೆ ಸೀಟು ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು. ನಂತರ ಮಾತನಾಡಿದ ಅವರು ತನ್ನ ಕೈಯಿಂದ ಮೋಟರ್ ಪಂಪ್ ಕೊಡಿಸುವುದಾಗಿ ಭರವಸೆ ನೀಡಿದರು. ನಂತರ ಮೊಳಕಾಲ್ಮುರು ಕೊಂಡ್ಲಹಳ್ಳಿ, ಚಳ್ಳಕೆರೆ ಕಾಲುವೇ ಹಳ್ಳಿ, ಹಿರಿಯೂರು ಖಂಡೇನಹಳ್ಳಿ ಗೆ ಭೇಟಿನೀಡಲು ಮುಂದಾದರು. ಇದೇ ಸಂದರ್ಭದಲ್ಲಿ ಸಂಸದ ಚಂದ್ರಪ್ಪ, ಜಿಲ್ಲಾಧಿಕಾರಿ ಶ್ರೀ ರಂಗಯ್ಯ, ಚಳ್ಳಕೆರೆ ಶಾಸಕ ರಘುಮೂತರ್ಿ, ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ ಸೇರಿದಂತೆ ಜಿಲ್ಲಾಡಳಿತ ಅಧಿಕಾರಿಗಳು ಭಾಗವಹಿಸಿದ್ದರು.