ನವದೆಹಲಿ: ನನ್ನ ಮನೆಯಲ್ಲಿ (ಪಕ್ಷದ ಕಚೇರಿಯಲ್ಲಿ) ನನ್ನ ನೋವುಗಳನ್ನು ಹಂಚಿಕೊಳ್ಳುವಾಗ  ನಾನು ಅತ್ತು ಬಿಟ್ಟೆ ಅದಕ್ಕೆಲ್ಲಾ ಬೇರೆ ಅರ್ಥ ಕಲ್ಪಿಸುವುದು ಬೇಡ ಅಂತ ಹೆಚ್.ಡಿ ಕುಮಾರಸ್ವಾಮಿಯವರು ಸ್ಪಷ್ಟಪಡಿಸಿದ್ದಾರೆ.

ಅವರು ಇಂದು ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು ಇದೇ ವೇಳ ಅವರು ಮಾತನಾಡಿ ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೊಬ್ಬ ಮಾನವೀಯತೆಯ ಮನುಷ್ಯನಾಗಿದ್ದೇನೆ. ಇದನ್ನು ಮೊದಲಿನಿಂದಲೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಹೀಗಾಗಿ ಭಾವುಕನಾಗಿ ಅತ್ತು ಬಿಟ್ಟೆ ನನಗೆ ಯಾರಿದಂಲೂ ತೊಂದರೆ ಆಗಿಲ್ಲ ಸುಮ್ಮನೆ ಬೇರೇನು ಅಲ್ಲ ಅಂತ ಹೇಳಿದ್ದಾರೆ.