ಮಂಗಳೂರು: ಯಾವಾಗಲು ಹೊಸ ಹೊಸ ವಿವಾದಗಳನ್ನ ಸೃಷ್ಠಿಸಿ ಮಿಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಯಾರು ಅಂತ ಕೇಳಿದ್ರೆ ಅದೇ ಹುಚ್ಚ ವೆಂಕಟ್ ಅಂತ ಹೇಳಿತ್ತೀರ. ಆದ್ರೆ ಈ ಬಾರಿ ಸಿಡಿಸಿರುವ ಹೊಸ ಬಾಂಬ್ ಯಾವುದು ಅಂದ್ರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿ ಸ್ಪರ್ಧಿ ಅಂತ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ ನಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸುತ್ತೇನೆ. ಇದಕ್ಕಾಗಿ ನಾನು ಮನೆ ಮನೆಗೆ ಹೋಗಿ ಓಟ್ ಬೇಡಲ್ಲ. ಪ್ರಚಾರಕ್ಕೂ ಹೋಗಲ್ಲ, ಸೀರೆನೂ ಕೊಡಲ್ಲ, ಡ್ರಿಂಕ್ಸ್ ಹಂಚಲ್ಲಾ ಅಂದ್ರು.

ನಾನು ಎಂದು ಅಪ್ಪ ಅಮ್ಮನಿಗೆ ಕೈ ನಾನು ಮುಗಿಯುವುದಿಲ್ಲ. ಮತದಾರರಿಗೆ ಯಾಕೆ ಕೈ ಮುಗಿಬೇಕು ಎಂದು ಪ್ರಶ್ನಿಸಿದ್ದಾರೆ. ಸೋತರು ಬೇಜಾರಿಲ್ಲ, ಅದು ನಿಮ್ಮ ಸೋಲು. ಸೋತರೇ ಎಂಪಿ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಮುಂದೆ ಪ್ರಧಾನಿಯಾಗುತ್ತೇನೆ. ಅಂತ ಹೇಳಿದ್ದಾರೆ. ಈಗ ಶಾಕ್ ಆಗುವ ಸರದಿ ಯಾರದು..?