ಮಂಡ್ಯ: ಶೋಕಿ ಎತ್ತುಗಳು ಬಿಸಿಲಿಗೆ ಬರಲ್ಲಎಂಬ ಸಿಎಂ ಹೇಳಿಕೆಗೆ ನಟ ಯಶ್ ಹೇಳಿದ್ದು ಹೀಗೆ ನಾನು ಡ್ರೈವರ್​​​ ಮಗ ನನಗೆ ಬಿಸಿಲು ಹೊಸದಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಟ ಯಶ್​​​ 2ನೇ ದಿನವೂ ಪ್ರಚಾರ ಮುಂದುವರಿಸಿರುವ ಯಶ್ ಬಿಸಿಲಿಗೆ ಬರಬೇಕೆಂದು ತೋರಿಸಿಕೊಡುವವರು ಜನ. ನಮ್ಮಪ್ಪ ಡ್ರೈವರ್​​​, ನಾನು ಡ್ರೈವರ್​​ ಮಗ. ಹೀಗಾಗಿ ನಮಗೆ ಬಿಸಿಲು ಹೊಸದಲ್ಲ. ಹುಟ್ಟಿದಾಗಿನಿಂದ ನೆರಳಲ್ಲೇ ಇದ್ದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ ನಟ ಯಶ್.