ಬೆಂಗಳೂರು : ರಾಜ್ಯದ ಮತದಾರರೇ ದಯಮಾಡಿ ಅಭಿವೃದ್ಧಿಗಾಗಿ ಎಲ್ಲರೂ ವೋಟ್ ಮಾಡಿ ಎಂದು ನಟ ಪ್ರಕಾಶ್ ರೈ ಮನವಿ ಮಾಡಿದ್ದಾರೆ.

ವಿಧಾನಸಭಾ ಚುನಾವಣೆ ಸಂಬಂಧ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ  ಪ್ರಕಾಶ್ ರೈ ಆತ್ಮೀಯ ಕರ್ನಾಟಕದ ಮತದಾರರೇ ದಯವಿಟ್ಟು ವೋಟ್ ಮಾಡಿ, ಜನಾದೇಶವಿಲ್ಲದ ಯಾರಾದರೂ ನಿಮ್ಮನ್ನು ಪ್ರತಿನಿಧಿಸಬಾರದು, ದಯವಿಟ್ಟು ಅಭಿವೃದ್ಧಿಗಾಗಿ ಮತನೀಡಿ ಎಂದು ಹೇಳಿದ್ದಾರೆ.

ಜವಾಬ್ದಾರಿಯೊಂದಿಗೆ ಮತ ಚಲಿಸಿ, ನಮ್ಮ ಭಾರತ ಎಂಥಾ ಭಾರತ ಮನುಷ್ಯರನ್ನೂ ಅವರವರ ಭಿನ್ನಾಭಿಪ್ರಾಯಗಳೊಂದಿಗೆ ಒಪ್ಪಿಕೊಳ್ಳುವ ಪ್ರೀತಿಸುವ, ಗೌರವಿಸುವ, ಸಂಸ್ಕಾರ ಇರುವಂತಹ ಭಾರತ. ಚುನಾವಣೆ ಮತದಾನ ಹಕ್ಕು ಚಲಾಯಿಸುವ ದಿನ ಹತ್ತಿರ ಬಂದಿದೆ. ನಿರ್ಧಾರ ನಿಮ್ಮದು, ಯೋಚನೆ ಮಾಡಿ ಅರ್ಥ ಮಾಡಿಕೊಳ್ಳಿ. ಮುಂದಿನ ಐದು ವರ್ಷ ನಿಮ್ಮ ಕೈಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.