ಬೆಂಗಳೂರು: ರಾಜ್ಯದಲ್ಲಿ ರಾಜಕಾರಣಿಗಳು, ಚಿತ್ರನಟರಿಗೂ ಕೊರೋನಾ ಸೋಂಕಿನ ಆತಂಕ ಎದುರಾಗಿದೆ.

ಸದ್ಯ ಹಿರಿಯ ನಟ ದೊಡ್ಡಣ್ಣ ಅವರಿಗೆ ಸೋಂಕಿನ ಭೀತಿ ಎದುರಾಗಿದೆ. ನಟಿ, ಸಂಸದೆ ಸುಮಲತಾ ಅವರಿಗೆ ಸೋಂಕು ತಗುಲಿದ್ದು, ಕಳೆದ ಗುರುವಾರ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸುಮಲತಾ ಅವರೊಂದಿಗೆ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ವಿಧಾನಸೌಧಕ್ಕೆ ಭೇಟಿ ನೀಡಿದ್ದರು.

ಈ ವೇಳೆ, ಸುಮಲತಾ ಅವರ ಸಂಪರ್ಕಕ್ಕೆ ಬಂದಿದ್ದ ಕಾರಣ ದೊಡ್ಡಣ್ಣ ಅವರಿಗೂ ಸೋಂಕಿನ ಭೀತಿ ಎದುರಾಗಿದೆ.