ಹೈದರಬಾದ್: ಟಾಲಿವುಡ್​ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ, ಶನಿವಾರವಷ್ಟೇ 65ನೇ ವಸಂತಕ್ಕೆ ಕಾಲಿರಿಸಿ ಆ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಅವರ ಮನೆಗೆ ತುಂಬಾ ಆಕರ್ಷಿಣೀಯವಾದ ಉಡುಗೊರೆಯೊಂದು ಬಂದಿದೆ.

ಏನಪ್ಪ ಅಂದ್ರೆ ಟಾಲಿವುಡ್​ನ ಇನ್ನೋರ್ವ ಸ್ಟಾರ್ ನಟ ಮೋಹನ್​ ಬಾಬು ಚಿರು ಜನ್ಮದಿನದ ಪ್ರಯುಕ್ತ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಕಟ್ಟಿಗೆಯಿಂದಲೇ ತಯಾರಿಸಿದ ಬೈಕ್​ವೊಂದನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಈ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಿರು, ಮೋಹನ್​ ಬಾಬು ಅವರ ಗಿಫ್ಟ್​ಗೆ ಧನ್ಯವಾದ ಅರ್ಪಿಸಿದ್ದಾರೆ.!