ಚಿತ್ರದುರ್ಗಳ : ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಪರ ಬ್ಯಾಂಟಿಗ್ ಮೊದಲು ಮಾಡಿದ್ದು ನಟ ಯಶ್. ಇಂದು ನಟ ಕಿಚ್ಚ ಸುದೀಪ್ ಶ್ರೀರಾಮುಲು ಪರ ಮತಯಾಚನೆಗೆ ರೋಡ್ ಶೋ ನಡೆಸಿದರು. ಮೊದಲು ನಟ ಯಶ್ ನಂತೆ ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಸ್ಥಾನಕ್ಕೆ ತೆರಳಿ ಪ್ರಚಾರಕ್ಕೆ ಮುಂದಾದರು. ಅದರಂತೆ  ಕಿಚ್ಚ ಸುದೀಪ ಅವರು ಸಹ ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಸ್ಥಾನಕ್ಕೆ ತೆರಳಿ ಮತ ಪ್ರಚಾರಕ್ಕೆ ಮುಂದಾದರು.

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲಾ. ಶ್ರೀರಾಮುಲು ಅವರ ಜನಪರ ಕೆಲಸಗಳನ್ನು ಮೆಚ್ಚಿ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಅಂತ ಮಾಧ್ಯಮದವರ ಮುಂದೆ ಹೇಳಿದರು.

ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ರೋಡ್ ಶೋ ಮುಗಿಸಿ ತಳಕು ಗ್ರಾಮಕ್ಕೆ ಆಗಮಿಸಿದ ಸುದೀಪ್ ರನ್ನು ನೋಡಲು ಸುದೀಪ್ ಅಭಿಮಾನಿಗಳು ಕೈ ಬೀಸಿದರು. ಸೆಲ್ಪಿ ಕ್ಲೀಕ್ಕಿಸಿಕೊಂಡರು.