ಚಿಕ್ಕಮಗಳೂರು: ನಟ ಕಿಚ್ಚ ಸುದೀಪ್​ ವಿರುದ್ಧ ಚಿಕ್ಕಮಗಳೂರಿನ ಜೆಎಂಎಫ್​ ನ್ಯಾಯಾಲಯ ಇಂದು ಬಂಧನ ವಾರಂಟ್​ ಜಾರಿ ಮಾಡಿದೆ. !

ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗಿದ್ದ ಕಾಫಿ ತೋಟದ ಬಾಡಿಗೆಯನ್ನು ಪಾವತಿಸಿಲ್ಲ ಮತ್ತು ತೋಟವನ್ನು ಹಾಳು ಮಾಡಿದ್ದಾರೆ ಎಂದು ಜುಲೈ 12, 2017 ರಂದು ದೀಪಕ್ ಮಯೂರ್ ಎಂಬುವರು ದೂರು ದಾಖಲಿಸಿದ್ದರು. ಈ ಬಗ್ಗೆ ಸುದೀಪ್​ಗೆ ಕೋರ್ಟ್​ ಹಲವು ಬಾರಿ ಸಮನ್ಸ್​ ನೀಡಿತ್ತು. ಆದರೆ, ಇದುವರೆಗೂ ಕೋರ್ಟ್​ಗೆ ಹಾಜರಾಗದ ಕಾರಣ ಬಂಧನ ವಾರಂಟ್​​ ಜಾರಿ ಮಾಡಲಾಗಿದೆ.!