ಬೆಂಗಳೂರು: ಎರಡು ರಾಜ್ಯಗಳ ಕಾವೇರಿ ವಿಷಯದಲ್ಲಿ ಸೌಹಾರ್ದತೆ ಇರಬೇಕು. ಕಾವೇರಿಗಿಂತಲು ಮೊದಲು ಮಾನವೀಯ ಸಂಬಂಧ ಮುಖ್ಯ. ಹೀಗಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಕುರಿತು ಮಾತುಕತೆ ನಡೆಸಬೇಕಿದೆ ಹಾಗಾಗಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಆಗಿದ್ದೇನೆ ಎಂದು ನಟ ಕಮಲಹಾಸನ್ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಕುರುವೈ ಬೆಳೆಗೆ ನೀರಿನ ಅಗತ್ಯ ಇರುವುದರಿಂದ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.

ಕಾವೇರಿ ವಿಷಯ ಸೌಹಾರ್ದಯುತವಾಗಿ ಬಗೆಹರಿಯಲು ತಾವು ಯಾವ ಪಾತ್ರವನ್ನಾದರೂ ನಿರ್ವಹಿಸಲು ಸಿದ್ಧ. ಎರಡು ರಾಜ್ಯಗಳ ನಡುವೆ ಸೇತುವೆಯಾದರೂ ಸರಿ, ಅಳಿಲಾದರೂ ಸರಿ ಎಂದು ಹೇಳಿದ್ದಾರೆ.