ಬೆಂಗಳೂರು: ರಾಜಕಾರಣಿಗಳನ್ನು ಒಳಗೊಂಡಂತೆ ನಟರ ಮೇಲೂ ಮೀಟೂ ಆರೋಪ ಕೇಳಿಬಂದಿದೆ. ಅದರಲ್ಲಿ ಬಹುಭಾಷ ನಟ ಅರ್ಜುನ್ ಸರ್ಜಾ ಮೇಲು ಮೀಟೂ ಆರೋಪ ಕೇಳಿಬಂದಿದೆ.

ಕನ್ನಡ ನಟಿ ಶೃತಿ ಹರಿಹರನ್ ಸಹ ‘ಮೀಟೂ’ ಅಭಿನಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಮ್ಯಾಗಜಿನ್ ನಲ್ಲಿ ಹೇಳಿಕೆಯನ್ನು ನೀಡಿದ ಶೃತಿಹರಿಹರನ್  ಅರ್ಜುನ್ ಸರ್ಜಾ ವಿರುದ್ದ ಲೈಂಗಿಕ ಕಿರುಕುಳ ದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಇದೇ ವೇಳೆ ಅವರು ಪತ್ರಿಕೆಯ ಸಂದರ್ಶನದಲ್ಲಿ ಇದೇ ವೇಳೆ ಅರ್ಜುನ ಸರ್ಜಾ ನನಗೆ ರೆಸಾರ್ಟ್​ ಗೆ ಹೋಗೋಣ, ಅಂತ ಒತ್ತಾಯ ಮಾಡುತ್ತಿದ್ದರು. ಇದಲ್ಲದೇ ವಿಸ್ಮಯ ಸಿನಿಮಾದ ದೃಶ್ಯವೊಂದರ ವೇಳೆಯಲ್ಲಿ ನಾನು ಅರ್ಜುನ ಸರ್ಜಾ ತಬ್ಬಿಕೊಳ್ಳುವ ದೃಶ್ಯವೊಂದಿತ್ತು, ಆ ವೇಳೆಯಲ್ಲಿ ಅವರು ಹೀಗೆ ಇನ್ನು ಸ್ವಲ್ಪಹೊತ್ತು ಇದ್ದು ಬಿಡೋಣ ಅಂತ ಹೇಳಿದ್ದರು ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿ ಈಗ ವೈರಲ್.