ನಟ ಅಂಬರೀಶ್ ಸ್ವರ್ಗದಿಂದಲೇ ಯಶ್ ಮಗಳಿಗೆ ಗಿಫ್ಟ್ ಕೊಟ್ಟಿದ್ದೇನು.!

ಬೆಂಗಳೂರು: ಅಂಬರೀಶ್ ನಮ್ಮೊಂದಿಗಿಲ್ಲ, ಆದರೆ ಅವರ ನೆನಪುಗಳು ಮಾತ್ರ ಸದಾ ಹಚ್ಚ ಹಸಿರು. ನಿಧನಕ್ಕೂ ಮುಂಚೆಯೇ ಅಂಬಿ ಯಶ್​ಗೆ ಮಗ ಅಥವಾ ಮಗಳು ಹುಟ್ಟಿದರೆ ಕೊಡಲು ಅಂತಾ 1.5 ಲಕ್ಷ ಮೌಲ್ಯದ ಗಿಫ್ಟ್​ವೊಂದನ್ನ ಬುಕ್​ ಮಾಡಿದ್ದರು.

ಮೊನ್ನೆಯಷ್ಟೆ ಅಂಬರೀಶ್ ಬಳಸುತ್ತಿದ್ದ ಮೊಬೈಲ್​​ಗೆ ‘ತೊಟ್ಟಿಲು ರೆಡಿ’ ಎಂಬ ಮೆಸೇಜ್ ಬಂದಿದೆ. ಇದನ್ನು ನೋಡಿದ ಸುಮಲತಾ ಯಶ್​​ಗೆ ಕಾಲ್ ಮಾಡಿ ‘ಅಂಬಿ ಸ್ವರ್ಗದಿಂದ ನಿನ್ನ ಮಗಳಿಗೆ ತೊಟ್ಟಿಲು ಕಳುಹಿಸಿದ್ದಾರೆ. ನಿನ್ನ ಮಗಳು ಅದೃಷ್ಟ ಮಾಡಿದ್ದಾಳೆ’ ಎಂದು ಹರಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.ಅದಕ್ಕೆ ನೆ ಅಂಬರೀಷರನ್ನು ಕಲಿಯುಗದ ಕರ್ಣ ಅಂತ ಕರೆಯುವುದು ಅಲ್ವ.!