ಮೈಸೂರು: ಕೊಡಗು ಸಂತ್ರಸ್ತರ ಮನೆಗಳ ಗುಣಮಟ್ಟದ ಕುರಿತು ಆಕ್ಷೇಪಿಸಿದ್ದ ನಟಿ ಹರ್ಷಿಕಾ ಪೂಣಚ್ಚ ಅವರ ಹೇಳಿಕೆಗೆ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.

ಹರ್ಷಿಕಾ ಪೂರ್ಣಚ್ಚ ಯಾರು? ಈಗ ಏನಾಗಿದ್ದಾರೆ. ಅವರು ಸಿನಿಮಾದವರು ಆ ಬಗ್ಗೆ ಮಾತನಾಡಲಿ. ಕೊಡಗು ಸಂತ್ರಸ್ತರ ಮನೆಗಳ ಕುರಿತು ಅವರಿಗೇನು ಗೊತ್ತಿದೆ.

ವಾಸ್ತವ ತಿಳಿಯದೆ ಮಾತನಾಡುವುದು ಮೂರ್ಖತನ. ಕೊಡಗಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಕೆಲವರಿಗೆ ಪ್ರಚಾರದ ಗೀಳು ಅಂಟಿಕೊಂಡಿದೆ ಎಂದು ಹೇಳಿದರು.