ಬೆಂಗಳೂರು : ನಟಿ ಪೂಜಾಗಾಂಧಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗ ಶ್ರೀರಾಮುಲು ಹೊಸ ಪಕ್ಷಕ್ಕೆ ಸೇರಿ ಸ್ಪರ್ಧೆಮಾಡಿದ್ದಳು ಆದ್ರೆ ಸೋತು ಸುಣ್ಣವಾದ ಬಳಿಕ ಮತ್ತೆ ಬಣ್ಣ ಹಚ್ಚಿ ನಟಿಸಲು ಮುಂದಾದರು. ಈಗ ಚುನಾವಣೆ ಬಂದಿರುವುದರಿಂದ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡಲು ತೆನೆಹೊತ್ತ ಮಹಿಳೆಗೆ ಜಂಪ್ ಆಗಿದ್ದಾರೆ.

ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಪೂಜಾಗಾಂಧಿ ಪಿಜಿಆರ್ ಸಿಂಧ್ಯಾ ನೇತೃತ್ವದಲ್ಲಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ನಟಿ ಪೂಜಾಗಾಂಧಿ ಕಳೆದ ಚುನಾವಣೆಯಲ್ಲಿ ರಾಯಚೂರಿನಿಂದ ಬಿಎಸ್ ಆರ್ ಪಕ್ಷದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಇದೀಗ ಮತ್ತೆ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿರುವ ಪೂಜಾಗಾಂಧಿ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.

ಈ ಪಕ್ಷದಲ್ಲಿ ಆದರೂ ರಾಜಕೀಯದ ನೆಲೆಕಾಣಲಿ ಎಂಬುದು ನಟಿ ಪೂಜಾಗಾಂಧಿಯ ಅಭಿಮಾನಗಳು ಅಂಬೋಣ ಎಲ್ಲದಕ್ಕೂ ಕಾಲ ಒಂದು ಇದೆಯಲ್ಲಾ.?