ಬೆಂಗಳೂರು: ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ, ಸತತ 4 ಗಂಟೆಗಳ ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ದಿಗಂತ್‌,  ಸಿಸಿಬಿ ಅಧಿಕಾರಿಗಳ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆʼ ಎಂದಿದ್ದಾರೆ.

ಇನ್ನು ಸಿಸಿಬಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌, ದಂಪತಿಗಳು ಸಂಪೂರ್ಣ ಸಹಕಾರ ನೀಡಿದ್ದು, ಮೊದಲ ಹಂತದ ವಿಚಾರಣೆಯಲ್ಲಿ ಸಾಕಷ್ಟು ಮಾಹಿತಿಗಳನ್ನ ಪಡೆದಿದ್ದೇವೆ. ಮತ್ತೊಮ್ಮೆ ಅವ್ರನ್ನ ವಿಚಾರಣೆಗೆ ಕರೆಯುತ್ತೇವೆ. ಸಧ್ಯದಲ್ಲಿಯೇ ಮುಂದಿನ ವಿಚಾರಣೆಯ ದಿನಾಂಕವನ್ನ ಪ್ರಕಟಿಸುತ್ತೇವೆ ಎಂದಿದ್ದಾರೆ.

ಪಾರ್ಟಿಯಲ್ಲಿ ನಟಿ ರಾಗಿಣಿ, ಸಂಜನಾ ಜೊತೆ ಐಂದ್ರಿತಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿರೇನ್ ಖನ್ನಾ ಹೇಳಿಕೆಯಲ್ಲೂ ಐಂದ್ರಿತಾ ರೈ ಹೆಸರು ಕೇಳಿಬಂದಿದ್ದು, ಕ್ಯಾಸಿನೋಗೆ ಭೇಟಿ ನೀಡುವ ವಿಡಿಯೋ ಆಧಾರದ ಮೇಲೆ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು.