ಬೆಂಗಳೂರು : ಪಕ್ಷದಿಂದ ಪಕ್ಷಕ್ಕೆ ನೆಗೆತ ಮಾಡುವುವುದು ಹೊಸದೇನಲ್ಲಾ. ಟಿಕೆಟ್ ಕೈ ತಪ್ಪಿದವರು ಬೇರೆ ಪಕ್ಷ ಎರಡು ಕೈಯಿಂದ ಬರಮಾಡಿಕೊಳ್ಳುವುದೇನು ಹೊಸದೇನಲ್ಲ ಅದರಂತೆ ನಟಿ ಅಮೂಲ್ಯ ಅವರ ಮಾವನರಿಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ ಬಾಲನಟಿಯಾಗಿ ಅಭಿನಯಿಸಿ, ನಾಯಕಿನಟಿಯಾಗಿ ಯಶಸ್ಸು ಕಂಡು ಚಲನಚಿತ್ರರಂಗದಿಂದ ದೂರವಿರುವ ನಟಿ ಅಮೂಲ್ಯ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬಿಜೆಪಿಯಲ್ಲಿ ಶಾಸಕ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅಮೂಲ್ಯ ಅವರ ಮಾವ, ಮಾಜಿ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಅವರು ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಬಂಡಾಯವೆದ್ದಿದ್ದರು. ಈಗ ರಾಮಚಂದ್ರ ಹಾಗೂ ಅವರ ಸೊಸೆ ನಟಿ ಅಮೂಲ್ಯ ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಮ್ಮುಖದಲ್ಲಿ ಅಮೂಲ್ಯ, ಹಾಗೂ ಅವರ ಮಾವ ಮಾಜಿ ಕಾರ್ಪೋರೇಟರ್ ರಾಮಚಂದ್ರ ಹಾಗೂ ಪತಿ ಜಗದೀಶ್ ಅವರು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಪಕ್ಷದ ಟಿಕೆಟ್ ಸಿಗುವ ಎಲ್ಲಾ ಲಕ್ಷಣಗಳನ್ನು ತಳ್ಳಿಹಾಕುವಂತ್ತಿಲ್ಲ.