ಬಾಗಲಕೋಟೆ: ನಟಿಮಣಿಗಳಿಗೆ ಹೊಸ ಅವಕಾಶ ಸಿಗಬೇಕು ಅಂದ್ರೆ, ಮಂಚ ಏರಬೇಕೆನ್ನುವ ವಾತಾವರಣ ಇಂದಿನದಲ್ಲ ಅದು ಅಂದಿನ ಕಾಲದಲ್ಲೂ ಇತ್ತು ಎಂದು ನಟ ಮಂಡ್ಯ ರಮೇಶ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಡ್ಯ ರಮೇಶ್  ಇದೇ ವೇಳೆ ಕನ್ನಡ ಚಿತ್ರ ರಂಗ, ತೆಲುಗು, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಕಡೆ ಹೊಸ ಅವಕಾಶಕ್ಕೆ ನಟಿಯರು ಮಂಚ ಏರಬೇಕೆನ್ನುವ ವಾತಾವರಣ ಇದ್ದೇ ಇದೆ.  ಅಥವಾ ಇಲ್ಲ ಅಂತ ಹೇಳುವ ಧೈರ್ಯವೂ ನನಗಿಲ್ಲ ಎಂದರು. ಬಹುತೇಕ

ಈ ಮಂಚದ ವಿಷಯ ಜನರಿಗೆ ಗೊತ್ತಿದೆ ಅದ್ರೆ ಅಂತಹ ವಿಷಯಗಳ ಬಗ್ಗೆ ತಲೆಕಡೆಸಿಕೊಳ್ಳುವುದಕ್ಕಿಂತಲು  ಹೊಸ ತಲೆಮಾರಿನ ಯುವಕ-ಯುವತಿಯರು ಧೈರ್ಯದಿಂದ ಎದುರಿಸಿ ಕೆಲಸ ಮಾಡಬೇಕಿದೆ ಎಂದರು.

ವೃತ್ತಿ ರಂಗಭೂಮಿ, ಕಲಾವಿದರ ಬದುಕು, ಸೇರಿದಂತೆ ರಂಗಭೂಮಿ ಉಳಿವಿಗೆ ಸರ್ಕಾರ, ಕಲಾಪ್ರೇಮಿಗಳು, ಕಲಾವಿದರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.