ಚಿತ್ರದುರ್ಗ: ನಗರಸಭೆ ಪ್ರಭಾರೆ ಅಧ್ಯಕ್ಷರಾಗಿ ೩೩ ನೇ ವಾರ್ಡಿನ ಶಾಂತಕುಮಾರಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ನಗರಸಭೆ ಅಧ್ಯಕ್ಷ ಹೆಚ್.ಎನ್.ಮಂಜುನಾಥಗೊಪ್ಪೆರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ಉಪಾಧ್ಯಕ್ಷೆ ಶಾಂತಕುಮಾರಿ ಅಲಂಕರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಸದಸ್ಯರುಗಳಾದ ರಾಘವೇಂದ್ರ(ಈರುಳ್ಳಿ) ತಿಪ್ಪೇಸ್ವಾಮಿ, ಸಿ.ಟಿ.ರಾಜೇಶ್, ಫಕೃದ್ದಿನ್, ಮಂಜುಳಮ್ಮ ಈ ಸಂದರ್ಭದಲ್ಲಿ ಹಾಜರಿದ್ದು, ಪ್ರಭಾರೆ ಅಧ್ಯಕ್ಷೆ ಶಾಂತಕುಮಾರಿರವರಿಗೆ ಅಭಿನಂದಿಸಿದರು.
ಮೂಲಭೂತ ಸೌಲಭ್ಯಕ್ಕೆ ಆದ್ಯತೆ: ಪ್ರಭಾರೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಂತಕುಮಾರಿ ನಗರದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೊದಲು ಆದ್ಯತೆ ನೀಡಿ ಸ್ವಚ್ಚತೆಯನ್ನು ಕಾಪಾಡುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.