ಬೆಳಗಾವಿ: ಧರ್ಮ ಜಾತಿ ಆಧಾರಿತ ನಿಗಮ ಘೋಷಣೆ ಅಪಾಯಕಾರಿ ನಡೆಯಾಗಿದ್ದು, ರಾಜ್ಯ ಸರ್ಕಾರ ಮೈಮೇಲೆ ಅಪಾಯ ಎಳೆದುಕೊಂಡಿದೆ ಎಂದು ಹಂದಿಗುಂದದ ಸಿದ್ದೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.

ಸರ್ಕಾರ ಕೂಡಲೇ ತಜ್ಞರು ಹಾಗೂ ಮಠಾಧೀಶರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕು ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದವರಿಗೆ ಶೇ 16 ರಷ್ಟು ಮೀಸಲಾತಿ ನೀಡಬೇಕು. ಅಂದಾಗ ಮಾತ್ರ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.