ವಿಜಯಪುರ: ಲಿಂಗಾಯಿತ –ವೀರಶೈವ ಧರ್ಮವನ್ನು  ಒಡೆಯಲು ಮುಂದಾಗಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಆಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಈ ಬುದ್ಧಿ ಅವರಿಗೆ ಚುನಾವಣಾ ಪೂರ್ವದಲ್ಲಿ ಬರಬೇಕಿತ್ತು ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಹೇಳದ್ದಾರೆ.

ಮಾಧ್ಯಮದವರೊಂದಿಗೆ  ಮಾತನಾಡಿದ ಶ್ರೀಗಳು, ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ಕೊಡುಗೆ ನೀಡಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವ ಧ್ವನಿ ಕೇಳಿಬರುತ್ತಿದೆ. ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ ಸಿಎಂ ಕುಮಾರಸ್ವಾಮಿ ಇಲ್ಲಿಯವರೆಗೂ ಸಾಲಮನ್ನಾ ಮಾಡಿಲ್ಲ ಎಂದರು. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಮಾನವಾಗಿ ಮುಖ್ಯ ಮಂತ್ರಿ ಕಾಣಬೇಕು ಎಂದರು.