ಬೆಂಗಳೂರು: ಮಾ.4ರಿಂದ ಪ್ರಾರಂಭವಾಗುತ್ತಿರುವ ದ್ವಿತೀಯ ಪಿಯು ಪರೀಕ್ಷೆ ಪ್ರವೇಶ ಪತ್ರ ಮತ್ತು ವಿದ್ಯಾರ್ಥಿಗಳ ಪಟ್ಟಿಗಳನ್ನು ಆನ್‌ಲೈನ್‌ ಮೂಲಕ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಲಾಗಿದೆ.

ಹಾಜರಾತಿ ಕೊರತೆ ಇದ್ದವರಿಗೆ ಪ್ರವೇಶ ಪತ್ರ ನೀಡದಂತೆ ಸೂಚಿಸಲಾಗಿದೆ. ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಯ ಮೂಲ ಪ್ರವೇಶಪತ್ರದ ಮೇಲೆ ಎಸ್‌ಎಟಿ ಎಂದು ನಮೂದಿಸಿ, ಪಟ್ಟಿ ಮಾಡಿ ಇದೇ 15ರೊಳಗೆ ಉಪನಿರ್ದೇಶಕರ ಕಚೇರಿಗೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ.