ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಲ್ಲಿ ಆತಂಕ ಶುರುವಾಗಿತ್ತು. ಯಾಕೆಂದ್ರೆ ಇಂಗ್ಲೀಷ್, ಭೌತಶಾಸ್ತ್ರ ಪ್ರಶ್ನೆ ಪತ್ರಿಕೆಗಳಲ್ಲಿ ದೋಶ ವಿದ್ದ ಕಾರಣ ಪೋಷಕರು, ವಿದ್ಯಾರ್ಥಿಗಳು ಅಸಮದಾನ ವ್ಯಕ್ತ ಪಡಿಸಿದ್ದರು.

ಈ ನಡುವೆ ಕೊನೇ ದಿನ ನಡೆದ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಯ ಮುವತ್ತಕ್ಕೂ ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ವ್ಯಾಕರಣ ದೋಷಗಳಿದ್ದವು ಎಂದು ವಿಷಯ ತಜ್ಞರು ಹೇಳಿದ್ದರು.

ಇದಲ್ಲದೇ ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಮೂರು ಪ್ರಶ್ನೆಗಳು ಕಠಿಣವಾಗಿದ್ದು, ಕೃಪಾಂಕ ನೀಡಬೇಕು ಎಂದು ವಿದ್ಯಾರ್ಥಿಗಳಿಂದ ಬೇಡಿಕೆ ಬಂದಿದ್ದ ಹಿನ್ನೆಲೆಯಲ್ಲಿ

ಸ್ವತಂತ್ರ ತಜ್ಞರ ಸಮಿತಿ  ಆಂಗ್ಲಭಾಷೆಯಲ್ಲಿ 3 ಕೃಪಾಂಕಗಳನ್ನು ಒಂದು ಅಂಕದ ಮೂರು ಕಡ್ಡಾಯ ಪ್ರಶ್ನೆಗಳಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲು ಶಿಫಾರಸ್ಸು ಮಾಡಿದೆ.  ಭೌತಶಾಸ್ತ್ರವಿಷಯದಲ್ಲಿ 6ಅಂಕಗಳಿಗೆ ಕೃಪಾಂಕಗಳನ್ನು ನೀಡಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ.