ಬೆಂಗಳೂರು: ಜೂನ್ 18 ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯ ಪೂರಕ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಈ ಮಧ್ಯೆ, ಮಹತ್ವದ ಸೂಚನೆಯನ್ನು ಹೊರಡಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಕಳೆದ ಮೂರು ತಿಂಗಳ ಅಂತರದಿಂದಾಗಿ ವಿದ್ಯಾರ್ಥಿಗಳು ಓದಿದ್ದನ್ನು ಮರೆಯುವ ಸಾಧ್ಯತೆ ಇರುವ ಕಾರಣ ಆನ್ಲೈನ್ ಮೂಲಕ ಪುನರ್ಮನನ ತರಗತಿ ನಡೆಸಬೇಕೆಂದು ಸೂಚಿಸಿದ್ದಾರೆ.

ಈ ಬಗ್ಗೆ ಕಾಲೇಜುಗಳ ಪ್ರಾಂಶುಪಾಲರು ಮತ್ತು ಇಂಗ್ಲಿಷ್ ಉಪನ್ಯಾಸಕರು ವಿಶೇಷ ಗಮನ ಹರಿಸಬೇಕೆಂದು ಹೇಳಿದ್ದಾರೆ.