ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್​ ಉತ್ತರ ಪತ್ರಿಕೆಯ ಮೌಲ್ಯಮಾಪನ ಇಂದು ಆರಂಭಗೊಂಡಿದೆ. ವಿಕೇಂದ್ರಿಕೃತ ವ್ಯವಸ್ಥೆಯಡಿ ಮೌಲ್ಯಮಾಪನ ನಡೆಯುತ್ತಿದ್ದು, ಆಯಾ ಜಿಲ್ಲೆಯ ಉತ್ತರ ಪತ್ರಿಕೆಗಳನ್ನು ಉಳಿದ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಿಗೆ ಕಳುಹಿಸುವ ಬಗ್ಗೆ ಈ ಹಿಂದೆಯೇ ಪಿಯು ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು.

ಅದರಂತೆ ಜಿಲ್ಲಾ ಉಪನಿರ್ದೇಶಕರು ಸಂಬಂಧಪಟ್ಟ ಜಿಲ್ಲೆಗಳಿಗೆ ಅಗತ್ಯ ಭದ್ರತೆಯೊಂದಿಗೆ ಉತ್ತರ ಪತ್ರಿಕೆ ಕಳುಹಿಸಿಕೊಟ್ಟಿದ್ದು, ಮೌಲ್ಯಮಾಪನ ಶುರುವಾಗಿದೆ.

( ಸಾಂದರ್ಭಿಕ ಚಿತ್ರ)