ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್  ಮೈತ್ರಿ ಬಗ್ಗೆ ಸಂಸದ ವೀರಪ್ಪ ಮೊಯ್ಲಿ ಸುಳಿವು ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಈ ಕುರಿತು ಮಾತನಾಡಿದ ವೀರಪ್ಪಮೊಯ್ಲಿ,ದೇಶದಲ್ಲಿ ಎಲ್ಲಿಯೂ ಪ್ರಧಾನಿ ಮೋದಿ ಅಲೆ ಇಲ್ಲ. ಹಣದ ಹೊಳೆಯನ್ನೇ ಮತ್ತೆ ಗೆಲ್ಲಲು ತಂತ್ರ ರೂಪಿಸಿದ್ದಾರೆ. ಆದರೆ ಬಿಜೆಪಿ ಸೋಲಿಸಲು ವಿಪಕ್ಷಗಳು ಸನ್ನದ್ಧವಾಗಿವೆ ಎಂದು ಹೇಳಿದರು.ದೋಸ್ತಿಗಳು ಮಾತುಕತೆಯಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯಾಲ್ಲಿ ಕಾಂಗ್ರೆಸ್ ಗೆ 18 ಕ್ಷೇತ್ರಗಳು ಸಿಗಲಿವೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.  ಇದೇ ಫೈನಲ್ಲಾ ಆದ್ರೆ ಯಾವ ಯಾವ ಕ್ಷೇತ್ರ  ಎಂಬುದು ಚರ್ಚೆ ವಿಷಯ.!