ಧರ್ಮಸ್ಥಳ : ದೋಸ್ತಿ ಸರಕಾರ ಐದು ವರ್ಷ..ನಾ……. ಅಂತ ರಾಗ ಎಳೆದಿದ್ದು ಬೇರೆಯಾರು ಅಲ್ಲ ಮಾಜಿ ಮಂತ್ರಿ ಸಿದ್ದರಾಮಯ್ಯ. ಯಾವಾಗ ಇವರು ಹೇಳಿದ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವರು ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬೆಂಬಲಿಗರೊಬ್ಬರು ಭೇಟಿಯಾಗಿದ್ದಾರೆ. ಇದೇ ವೇಳೆ ಬೆಂಬಲಿಗರು ಕೇಳಿದ ಪ್ರಶ್ನೆಯೊಂದಕ್ಕೆ ಲೋಕಸಭಾ ಚುನಾವಣಾ ತನಕ ಸಮ್ಮಿಶ್ರ ಸರ್ಕಾರ ಇರುತ್ತದೆ ಆಮೇಲೆ ಏನು ಆಗುತ್ತೋ ಅಂತ ಗೊತ್ತಿಲ್ಲ ಅಂತ ಹೇಳಿದ್ದಾರೆ.

ಆಗ ಸಿದ್ದರಾಮಯ್ಯರು ಆ… ಐದು ವರ್ಷನಾ…. ಅಂತ ಹೇಳಿದ್ದಾರೆ. ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರ ಬರೋದು ಡೌಟು, ಒಂದು ವೇಳೆ ವಿರೋಧ ಪಕ್ಷದವರು ಒಂದಾದರೇ ಮೋದಿ ಸರ್ಕಾರ ತಿಪ್ಪರಾಗ ಹಾಕಿದರು ಕೂಡ ಮತ್ತೆ ಮೋದಿ ಪ್ರಧಾನಿಯೋಗೋದಿಲ್ಲ ಅಂತ ಹೇಳಿದ್ದಾರೆ.

ಇನ್ನು ಕೆಲವು ದಿವಸಗಳ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮುಂದಿನ ಲೋಕಸಭಾ ಚುನಾವಣೆ ತನಕ ನನ್ನ ಯಾರನ್ನು ಮುಟ್ಟುವುದಕ್ಕೆ ಸಾಧ್ಯವಾಗಿಲ್ಲ ಅಂತ ಹೇಳಿದ್ದರೂ ಸಹ ಐದು ವರ್ಷ ಅಂತ ರಾಗ ಎಳೆದಿರುವುದು ಚರ್ಚೆ್ಗೆ ಗ್ರಾಸವಾಗಿದೆ.