ಬೆಂಗಳೂರು: ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ ಸಚಿವ ಸಂಪುಟದಲ್ಲಿ ಯಾರ್ಯರು ಸೇರುತ್ತಾರೆ ಎಂಬುದು ಇನ್ನೂ ಖಾತರಿ ಇಲ್ಲ ಊಹಾಪೂಹಾ  ಕಾಂಗ್ರೆಸ್- ಜೆಡಿಎಸ್ ನ ಎಂ.ಎಲ್.ಸಿಗಳಿಗೆ ಸಚಿವ ಸ್ಥಾನವಿಲ್ಲ. ಹೊಸಬರಿಗೆ ಆಧ್ಯತೆ, ಇನ್ನೇನು ಇಂತವರಿಗೆ ಸಚಿವ ಸ್ಥಾನ ಗ್ಯಾರಂಟಿ ಅಂತ ಮಾಧ್ಯಮಗಳಲ್ಲಿ ಪ್ರಚಾರವಾಗಿದೆ ಆದ್ರೆ…

ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದೆ. ಮಧ್ಯಾಹ್ನ 02-12 ಕ್ಕೆ ರಾಜಭವನದ ಗ್ಲಾಸ್ ಹೌಸ್ ನಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಪ್ರಮಾಣ ವಚನ ಬೋಧಿಸಲಿದ್ದಾರೆ. ಇವೆಲ್ಲದರ ನಡುವೆ ಉಭಯ ಪಕ್ಷಗಳ ನಾಯಕರುಗಳು ಇಂದು ಸಚಿವ ಸಂಪುಟ ಸೇರಿಕೊಳ್ಳಲಿರುವ ನೂತನ ಸಚಿವರ ಹೆಸರಗಳನ್ನು ಫೈನಲ್ ಮಾಡಿದ್ದು, ಆದರೆ ಯಾರ್ಯಾರು ಸಚಿವ ಸಂಪುಟದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುವ ಮಾಹಿತಿಯ ಗುಟ್ಟನ್ನು ಇಲ್ಲಿ ತನಕ ಬಿಟ್ಟುಕೊಟ್ಟಿಲ್ಲ ಎಂಬುದು ಮಾತ್ರ ವಾಸ್ತವ.!