ಬೆಂಗಳೂರು: ಪೂರಕ ಬಜೆಟ್ ಮಂಡನೆ ಸಾಕು ಅಂತ ದೋಸ್ತಿ ಸರಕಾರದ ಭಾಗವಾದ ಕಾಂಗ್ರೆಸ್ ಮುಖಂಡರ ವಾದ ವಾಗಿತ್ತು. ಇಲ್ಲ ಹೊಸ ಸರಕಾರ ಬಂದಾಗ ಹೊಸ ಬಜೆಟ್ ಮಂಡನೆ ಆಗಬೇಕು ಎಂಬುದು ಮತ್ತೊಬ್ಬರವಾದ ವಾಗಿತ್ತು. ವಾದ ವಿವಾದದ ನಡುವೆ ಮುಖ್ಯ ಮಂತ್ರಿ ಕುಮಾರಸ್ವಾಮಿ  ಏನು ಹೇಳಿದ್ದಾರೆ ಅಂದ್ರೆ.

ಜುಲೈ ಮೊದಲ ವಾರದಲ್ಲಿ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಅನ್ನು ಮಂಡನೆ ಮಾಡಲಾಗುವುದು ಅಂತ ಸಿ.ಎಂ ಹೆಚ್.ಡಿ ಕುಮಾರ ಸ್ವಾಮಿ ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ. ಹಾಗಾಗಿ ಜುಲೈ 6 ರಂದು ಬಹುತೇಕ ಬಜೆಟ್ ಮಂಡನೆ ಮಾಡಲಾಗುತ್ತದೆ.

ಚುನಾವಣೆಗೂ ಮುನ್ನಾ ಜೆಡಿಎಸ್ ಹಾಗೂ ಕಾಂಗ್ರೆ ಸ್ ನ ಪ್ರಣಾಳಿಕೆಗಳ ಪೂರ ಬಜೆಟ್ ಬರುತ್ತಾ ಅಥವಾ ಬೇರೆ ಬರುತ್ತಾ ಎಂಬುದು ಚರ್ಚೆ ವಿಷಯ ಆದ್ರೆ ಬಜೆಟ್ ಮಂಡನೆಯವರೆಗೂ ಕಾಯಬೇಕು ಅಷ್ಟೆ.