ಬೆಂಗಳೂರು : ದೋಸ್ತಿ ಸರ್ಕಾರದ ಮೊದಲ ಅಧಿವೇಶನ 2 ರಿಂದ ಆರಂಭಿಸಲು ನಿರ್ಧಾರ ಮಾಡಲಾಗಿದ್ದು, ಈ ಸಂಬಂಧ ಈಗಾಗಲೇ ರಾಜ್ಯಪಾಲರಿಗೆ ಪತ್ರ ರವಾನೆ ಮಾಡಲಾಗಿದೆಯಂತೆ.

ಸಮ್ಮಿಶ್ರ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ. ಮೊದಲ ಅಧಿವೇಶನದಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಇದಕ್ಕಾಗಿ ರಾಜ್ಯಪಾಲ ವಾಜುಬಾಯಿ ಬಾಲ ಅವರ ಸಮಯವನ್ನು ಕೇಳಲಾಗಿದೆ. ರಾಜ್ಯಪಾಲರ ಅನುಮೋದನೆ ಸಿಕ್ಕರೆ ಜುಲೈ 2 ರಂದು ಜಂಟಿ ಅಧಿವೇಶನವನ್ನು ನಡೆಸಲಾಗುವುದು ಎನ್ನಲಾಗಿದೆ ಎಂಬುದು ಸುದ್ದಿ.