ಬೆಂಗಳೂರು: ದೊಸ್ತಿ ಸರಕಾರ ಮಂಡಿಸಿದ ಬಜೆಟ್ ನಲ್ಲಿ ರೈತರ ಸಾಲಮನ್ನಾ ಮಂಡನೆ ಆಗುತ್ತಿದ್ದಂತೆ ಜನ ಸಾಮಾನ್ಯರ ಮೇಲೆ ಹೊರೆ ಎಷ್ಟು.  ಕಡಿಮೆ ಆಗಿದ್ದು ಯಾವುದು ಡಿಟೈಲ್ ಇಲ್ಲಿದೆ.

ಪೆಟ್ರೋಲ್ ಮೇಲಿನ ಸೆಸ್ ಶೇ. 30 ರಿಂದ ಶೇ. 32ಕ್ಕೆ ಏರಿಕೆ ಹಾಗೂ ಡೀಸೆಲ್ ಮೇಲಿನ ಸೆಸ್ ಶೇ. 19 ರಿಂದ 21 ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 1.14 ರೂ. ಡಿಸೇಲ್ ಬೆಲೆ 1.12 ರೂ. ಹೆಚ್ಚಳ. ವಿದ್ಯುತ್ ದರ ಯೂನಿಟ್ ಗೆ 20 ಪೈಸೆ ಹೆಚ್ಚಳವಾಗಿದೆ. ಮದ್ಯದ ಮೇಲಿನ ತೆರಿಗೆ ಶೇ. 4 ರಷ್ಟು ಹೆಚ್ಚಳವಾಗಿದೆ. ಮೋಟಾರ್ ಬೈಕ್ ದುಬಾರಿ.

ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆ ಮೇಲಿನ ತೆರಿಗೆ. ಸಿರಿಧಾನ್ಯಗಳಾದ ನವಣೆ ಗಳ ಬೆಲೆ ಕಡಿಮೆಯಾಗಲಿದೆ. ಪೆಟ್ರೋಲ್ ಉತ್ಪನ್ನಗಳು ಹೆಚ್ಚಾಗಿರುವುದರಿಂದ  ಅಗತ್ಯ ಸಾಮಾಗ್ರಿಗಳ ಬೆಲೆ ಕೂಡ ಹೆಚ್ಚಳವಾಗಲಿದೆ.

(ಸಾಂದರ್ಭಿಕ ಚಿತ್ರ)