ನವದೆಹಲಿ: ರಾಷ್ಟ್ರೀಯ, ರಾಜ್ಯ, ಪ್ರಾದೇಶಿಕ ಹೀಗೆ ಎಲ್ಲವೂ ಸೇರಿ ಇಡೀ ದೇಶದಲ್ಲಿ ಒಟ್ಟು 2293 ರಾಜಕೀಯ ಪಕ್ಷಗಳಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ದೇಶದಲ್ಲಿ ಹಲವು ರಾಜಕೀಯ ಪಕ್ಷಗಳ

ನೋಂದಣಿಯಾಗಿವೆ. 2293ರಲ್ಲಿ ಏಳು ರಾಷ್ಟ್ರೀಯ, 59 ಪ್ರಾದೇಶಿಕ ಪಕ್ಷಗಳಾಗಿವೆ.

 

ವರ್ಷದ ಫೆಬ್ರವರಿಮಾರ್ಚ್ ತಿಂಗಳಲ್ಲಿಯೇ 149 ಪಕ್ಷಗಳು ನೋಂದಣಿಯಾಗಿವೆಯಂತೆ. ಬಹುತೇಕ ಪಕ್ಷಗಳು ಶೇಕಡಾವಾರು ಮತ ಪಡೆಯದ ಕಾರಣ ಅವುಗಳಿಗೆ ಚಿಹ್ನೆ ಇನ್ನು ನೀಡಲಾಗಿಲ್ಲ ಎಂದು ಹೇಳಿದೆ.