ಧಾರವಾಡ: ತಮ್ಮ ಎದುರಾಳಿಗಳಿ ಮೋದಿ, ಷಾ ಇಬ್ಬರು ದೇವೇಗೌಡರನ್ನು ಹಾಡಿ ಹೋಗಳುತ್ತಿದ್ದಂತೆ ಇತ್ತ ಧಾರವಾಡದ ನರಗುಂದದಲ್ಲಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಳೆದು ಲೋಕಸಭಾ ಚುನಾವಣೆಯಲ್ಲಿ ರಾಜ್ಯಕ್ಕೆ ಬಂದಿದ್ದ ಮೋದಿ, ಷಾ ಇಬ್ಬರು ದೇವೇಗೌಡರ ಕುರಿತು ಏನ್ ಹೇಳಿದ್ರೂ ಗೊತ್ತಾ ಅಂತಾ ವೇದಿಕೆ ಮೇಲಿದ್ದವರನ್ನು ಪ್ರಶ್ನೀಸುತ್ತಾ, ಆಗ ಇದೇ ದೇವೇಗೌಡರನ್ನು ಕುರಿತು ಇವರಿಬ್ಬರು ಅವಹೇಳನ ಮಾಡಿದ್ರು. ಗೌಡರನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಕು ಎಂದು ಹೇಳುವ ಮೂಲಕ ಹಿರಿಯ ವ್ಯಕ್ತಿಗೆ ಅವಮಾನ ಮಾಡಿದ್ರು. ಈಗ ಇದ್ದಕ್ಕಿದ್ದಂತೆ ಗೌಡ್ರು ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಇದಕ್ಕೆ ಕಾರಣ ಇಬ್ಬರಿಬ್ಬರು ಮಾಡಿಕೊಂಡಿರುವ ಚುನಾವಣಾ ಪೂರ್ವ ಮೈತ್ರಿ. ಇದನ್ನೇ ನಾನು ಹಲವು ಸಾರಿ ಹೇಳಿದ್ದೇನೆ ಎಂದ ಅವರು, ನಾವೇ ಬಹುಮತ ಪಡೆದು ಅಧಿಕಾರಕ್ಕೆ ಬಂದು ಇವರ ಆಸೆಗೆ ಭಂಗ ಬರಲಿದೆ ಎಂದರು.