ಬೆಂಗಳೂರು:  ಎರಡು ದಿನಗಳ ಕೆಳಗೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಯವರು ಸಮಿಶ್ರ ಸರಕಾರದ ಬಗ್ಗೆ ಇನ್ನೂ ಒಂದು ವರ್ಷವಾದರೂ ಆಡಳಿತ ನಡೆಸುತ್ತೇನೆ ಎಂದು ಹೇಳಿದ್ದು ನೆನಪಿರಬೇಕಲ್ವೆ

ಆದ್ರೆ ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ತುಮಕೂರು ಜಿಲ್ಲೆಯ ಪಾವಗಡ ತಾಳೆ ಮರದಹಳ್ಳಿಯ ಸಮಾರಂಭದಲ್ಲಿ ಸಮಿಶ್ರ ಸರಕಾರದ ಸ್ಥಿರತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ನಮ್ಮದು 37 ಸೀಟುಗಳು  ಕಾಂಗ್ರೆಸ್ ನವರದು 78 ಸೀಟುಗಳು ಗೆದಿದ್ದರೂ  ನಮಗೆ ಸಿ.ಎಂ ಸೀಟು ಬಿಟ್ಟುಕೊಟ್ಟಿರುವ ಹಿಂದೆ ದೇವರ ಅನುಗ್ರಹವಿದೆ. ದೇವರು ಅಧಿಕಾರಕೊಟ್ಟಿದ್ದಾನೆ, ಪರೀಕ್ಷೆ ಮಾಡುತ್ತಿದ್ದಾನೆ ನೋಡಬೇಕು ಎಲ್ಲಿಯವರೆಗೆ ಇರುತ್ತೋ ಅಂತ ಮಾರ್ಮಿಕವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.