ಬೆಂಗಳೂರು: ನಿನ್ನೆ ಹುಬ್ಬಳಿಯಲ್ಲಿ ನರೇಂದ್ರ ಮೋದಿಯವರು ಮಣ್ಣಿನ ಮಗ ಏನು ಮಾಡಿದ್ದಾರೆ ಎಂದು ಲಘುವಾಗಿ ಮಾತನಾಡಿದ್ದರ ಬಗ್ಗೆ ಗೌಡರು ನಾನು ದೆಹಲಿಗೆ ಹೋಗುತ್ತಾ ಇದ್ದೇನೆ. ಅಲ್ಲೇ ಅವರಿಗೆ ಉತ್ತರ ಕೊಡುತ್ತೇನೆ ಎಂದು ಹೇಳೀದರು.

ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ದೇವೇಗೌಡರು, ಸಂಸತ್ ನಲ್ಲಿ ಸಮಯ ಸಿಕ್ಕರೆ ಈ ಬಗ್ಗೆ ನಾನು ಮಾತನಾಡುತ್ತೇನೆ. 50 ವರ್ಷ ನಾನು ಏನ್ ಮಾಡಿದ್ದೀನಿ ಅಂತ ಸಂಸತ್ ನಲ್ಲಿ ಉತ್ತರ ಕೊಡ್ತೀನಿ ಎಂದು ಮೋದಿ ವಿರುದ್ಧ ಕಿಡಿಕಾರಿದರು.

ಮಣ್ಣಿನ ಮಗ ದೇಶಕ್ಕೆ ಏನು ಮಾಡಿದ್ದಾರೆ. ಅಂತ ಮೋದಿ ಲಘುವಾಗಿ ಮಾತನಾಡಿದ್ದಾರೆ. ನಾನು ದೆಹಲಿಗೆ ಹೋಗುತ್ತಾ ಇದ್ದೇನೆ. ಮಣ್ಣಿನ ಮಗ ಏನ್ ಮಾಡಿದ್ದಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ಕೊಡುತ್ತೇನೆ ಎಂದರು.