ಗಂಗಾವತಿ: ಪ್ರಧಾನಿ ಮೋದಿ ಇಂದಿನ  ತಮ್ಮ ಭಾಷಣದಲ್ಲಿ ಆರಂಭದಲ್ಲಿಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುಟುಂಬದವರ ಬಗ್ಗೆ ಮಾತನಾಡುತ್ತಾ ಮೋದಿ ಅವರು ಪ್ರಧಾನಿ ಆದರೆ ನಾನು ದೇಶ ತೊರೆಯುತ್ತೇನೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಗೌಡರು ಹೇಳಿದ್ದರು.

ಆದರೆ ನಿವೃತ್ತಿ ಪಡೆಯುವ ಬದಲು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರುತ್ತಿದ್ದಾರೆ. ಅವರು ಸುಳ್ಳನ್ನೇ ಹೇಳಿಕೊಂಡು ಬರುತ್ತಿದ್ದು, ಗೌಡರು ಮತ್ತು ಮಕ್ಕಳು ಸುಳ್ಳಿನ ಸರದಾರರು ಎಂದರು.