ತುಮಕೂರು : ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ತಮ್ಮ ಕೊನೆಯ ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ಹೇಳಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ವಿ. ಸೋಮಣ್ಣ, ಈ ಬಾರಿಯ ಚುನಾವಣೆ ದೇವೇಗೌಡರಿಗೆ ಅವಶ್ಯಕವಿರಲಿಲ್ಲ. ಅನವಶ್ಯಕವಾಗಿ ಸ್ಪರ್ಧಿಸಿ ಯಾಕೆ ಗೊಂದಲ ಸೃಷ್ಠಿ ಮಾಡಿಕೊಂಡರು ಎಂದು ಗೊತ್ತಾಗುತ್ತಿಲ್ಲ ಎಂದರು.

ಯಾವ ಅಸ್ತ್ರ ದೇವೇಗೌಡರ ತಲೆ ತಿಂದಿತು ಎಂದು ಗೊತ್ತಿಲ್ಲ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ನಂತರ ಮಾನಸಿಕವಾಗಿ  ಕುಗ್ಗುತ್ತಾರೆ ನೋವು ಅನುಭವಿಸುತ್ತಾರೆ ಎಂದರು.